ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಒಂದು ಅವಾಂತರ ಮಾಡಿಕೊಂಡಿದ್ದಾರೆ. ಡಾಲಿ ಅವರು ಕೊಟ್ಟ ಶಾಕ್‌ಗೆ ರಚತಾ ರಾಮ್‌ ಎಕ್ಸಪ್ರೇಶನ್‌ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಂತದ್ದು ಏನ್‌ ಇದೆ ಈ ವೀಡಿಯೋದಲ್ಲಿ ಎನ್ನುವುದನ್ನು ನಾವು ಹೇಳುತ್ತೇವೆ ಬನ್ನಿ.

 

 

ಮಾನ್ಸೂನ್​ ರಾಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಣ್ಣ ಟೀಸರ್ ರಿಲೀಸ್ ಮಾಡಿತ್ತು, ಆ ಟೀಸರ್‌ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆಗಸ್ಟ್ 19ಕ್ಕೆ ಸಂಪೂರ್ಣ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ನಟ ಡಾಲಿ ಧನಂಜಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ಸಖತ್‌ ವಿಶೇಷವಾಗಿದೆ.

 

 

ರಚಿತಾ ರಾಮ್ ಕಳೆದ ಮೂರ್ನಾಲ್ಕು ವರ್ಷದಿಂದ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳೋದನ್ನ ಹೆಚ್ಚು ಮಾಡಿಕೊಂಡಿದ್ದಾರೆ ಈ ಕಲರ್ಫುಲ್ ಪದ್ಮಾವತಿ. ಅದು ಹಸಿ ಬಿಸಿ ದೃಶ್ಯ ಇರಲಿ, ಲಿಪ್ಲಾಕ್ ಸೀನೇ ಆಗಿರಲಿ. ರಚಿತಾ ಲೀಲಾ ಜಾಲವಾಗಿ ಮೈ ಚಳಿ ಬಿಟ್ಟು ಅಭಿನಯಿಸುತ್ತಿದ್ದಾರೆ. ಡಾಲ ಅವರ ಯಾವುದೇ ಪಾತ್ರ ಮಾಡಿದ್ರು ಕೂಡಾ ವಿಶೇಷವಾಗಿರುತ್ತದೆ. ಇವರು ಒಂದು ಪಾತ್ರವನ್ನು ಮಾಡಿದ್ರೆ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳಿಯುವಂತೆ ತೂಕ ಬರೀತವಾಗಿರುತ್ತೆ ಇವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು.

 

 

ಆದರೆ ಮಾನ್ಸೂನ್ ರಾಗ ಸಿನಿಮಾದಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ತುಂಬ ನೀಟ್ ಆಗಿ ಬಂದಿದೆ ಎನ್ನವ ಮಾತು ಕೇಳಿಬರುತ್ತಿದೆ. ಮಾನ್ಸೂನ್ ಸಮಯದಲ್ಲಿ ಈ ಸಿನಿಮಾ ಶೂಟಿಂಗ್‌ನ್ನು ಚಿತ್ರತಂಡ ಮಾಡಿತ್ತು. ಆದರೆ ಮಾನ್ಸೂನ್ ಸಮಯದಲ್ಲಿ ರಿಲೀಸ್ ಆಗುತ್ತಿರುವುದು ಈ ಸಿನಿಮಾದ ವಿಶೇಷವಾಗಿದೆ.

 

 

ಸಿನಿಮಾ ತಂಡ ಇಡೀ ರಾತ್ರಿಯೆಲ್ಲ ಮಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿದೆಯಂತೆ, 80% ಸಿನಿಮಾ ಮಳೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಇಲ್ಲಿ ಮುಜುಗರ ಆಗುವಂತಹ ದೃಶ್ಯ ಇಲ್ಲ, ಇಡೀ ಕುಟುಂಬ ಕೂತು ಈ ಸಿನಿಮಾ ನೋಡಬಹುದು ಎಂದು ಮಾನ್ಸೂನ್‌ ತಂಡ ಹೇಳುತ್ತಿದೆ. ಈ ಸಿನಿಮಾದ ಸುದ್ದಿಗೋಷ್ಠಿಯೊಂದನ್ನು ಮಾಡಿತ್ತು. ಈ ವೇಳೆ ನಡೆದ ಒಂದು ಘಟನೆಯ ವೀಡಿಯೋ ಕುರಿತಾಗಿ ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.

 

 

ಹೌದು ಡಾಲಿ ಅವರು ಸುದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಚಿತಾ ರಾಮ್‌ ಕೂಡಾ ಜೊತೆಯಾಗಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಸಿನಿಮಾ ಕುರಿತಾಗಿ ಮಾಹಿತಿ ನೀಡಿದರು. ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವಂತೆ ಮನವಿ ಮಾಡಿದ ಸುದ್ದಿಗೋಷ್ಠಿ ಮುಗಿಸಿ ಹೊರಡಲು ಸಿದ್ಧರಾದರು. ಈ ವೇಳೆ ಡಾಲಿ ಅವರು ತೊಟ್ಟಿದ್ದ ಪಂಚೆ ಬಿಚ್ಚಿ ಕೆಳಗೆ ಸರಿದಿದೆ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ರಚಿತಾ ರಾಮ್‌ ದಿಟ್ಟಿಸಿ ನೋಡಿ ಮುಗುಳ ನಗೆ ನಕ್ಕಿದ್ದಾರೆ. ನಾನು ಇಲ್ಲೇ ವಾರ್ಡ್‌ರೂಮ್‌ ಮಾಡಿ ಕೊಂಡೆ ಎಂದು ರಚಿತಾ ಅವರಿಗೆ ಹೇಳಿದ್ದಾರೆ. ರಚಿತಾ ಮಾತ್ರ ಈ ದೃಶ್ಯವನ್ನು ನೋಡಲಾರದೆ ನಗುತ್ತಾ ಪಲಾಯನ ಮಾಡಿದ್ದಾರೆ.

 

 

ಈ ವೀಡಿಯೋ ನೋಡಿದ ಅಭಿಮಾನಿಗಳು ತರಹೆವಾರಿ ಕಾಮೆಂಟ್‌ ಮಾಡುವ ಮೂಲಕವಾಗಿ ಡಾಲಿ ಅವರ ಕಾಲೆಳೆಯುತ್ತಿದ್ದಾರೆ.

Leave a comment

Your email address will not be published.