ನಟ ದರ್ಶನ್‌ ಅಭಿಮಾನಿಗಳ ಖ್ಯಾತಿ ಎಷ್ಟು ಇದೆ ಎಂಬುದು ಗೊತ್ತಿರುವ ವಿಚಾರ. ಇವರು ಅಭಿನಯಿಸಿದ ಸಿನಿಮಾಗಳೆಲ್ಲವೂ ಸೂಪರ್‌ ಹಿಟ್‌ ಎನ್ನುವಷ್ಟು ಸಿನಿಮಾರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಈ ನಟ ಇತ್ತೀಚೆಗೆ ಮಾಧ್ಯದವರಿಂದ ದೂರವಾಗಿದ್ದಾರೆ. ಆದರೆ ಅಭಿಮಾನಿಗಳಿಗೆ ಸಖತ್‌ ಹತ್ತಿರವಾಗಿದ್ದಾರೆ. ಆದರೆ ಅದೇ ಅಭಿಮಾನಿಗಳ ವಿಚಾರವಾಗಿಯೇ ಮತ್ತೆ ನಟ ದರ್ಶನ್‌ ಸುದ್ದಿಯಾಗುತ್ತಿರುವುದು ವಿಶೇಷ.

 

 

ಹೌದು ನಟ ದರ್ಶನ್‌ ಅಭಿನಯಿಸಿರುವ ಕ್ರಾಂತಿ ಸಿನಿಮಾ ಹೊಸಪೇಟೆ, ಬಳ್ಳಾರಿ, ಹಬ್ಬಳ್ಳಿಯಲ್ಲಿ ಬಿಡುಗಡೆಯಾಗಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಭಿಮಾನಿಗಳ ಈ ನಿರ್ಧಾರದ ಹಿಂದೆ ಒಂದು ಬಲವಾದ ಕಾರಣವೂ ಇದೆ. ದರ್ಶನ್‌ ಅವರ ಒಂದು ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

 

 

ಅಪ್ಪು ಮೇಲಿನ ಅಭಿಮಾನ ಎಷ್ಟು ಇದೆ ಎಂದು ನಾವೇನು ಮತ್ತೆ,,, ಮತ್ತೆ ನಿಮಗೆ ಹೇಳಬೇಕಾಗಿಲ್ಲ. ಪ್ರತಿಯೊಬ್ಬ ಅಭಿಮಾನಿಗೂ ಅವರ ನೆಚ್ಚಿನ ನಟ ಎಂದರೆ ಹುಚ್ಚು ಪ್ರೀತಿ. ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮನ್ನು ಅಗಲಿ ೧೦ ತಿಂಗಳು ಕಳೆದಿದೆ. ಆದರೆ ಅವರ ಮೇಲಿನ ಅಭಿಮಾನ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೊಸಪೇಟೆ, ಬಳ್ಳಾರಿ, ಉತ್ತರ ಕರ್ನಾಟಕ ಭಾಗದಲ್ಲಿ ಅಭಿಮಾನಿಗಳ ದಂಡೆ ಇದೆ.

 

 

 

ನಟ ದರ್ಶನ್‌ ಅವರು ಮೀಡಿಯಾ ಸಂದರ್ಶನವೊದರಲ್ಲಿ ಮಾತನಾಡುವಾಗ ಅಪ್ಪು ಹೆಸರನ್ನು ಬಳಸಿ ಒಂದು ವಿಚಾರವಾಗಿ ಮಾತನಾಡಿದ್ದಾರೆ. ಅಪ್ಪು ನಿಧನರಾದಾಗಲೇ ನೋಡಿದ್ದೀರೊ ಎಷ್ಟೊಂದು ಜನ ಅಭಿಮಾನಿಗಳು ಬಂದಿದ್ದರು ಎಂದು. ಆದರೆ ನನಗೆ ಬದುಕಿದ್ದಾಗಲೇ ಅಭಿಮಾನಿಗಳ ಪ್ರೀತಿ ಗೊತ್ತಾಗಿದೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆ ಕೆಲವು ಅಭಿಮಾನಿಗಳು ಅವರಿಗೆ ಬೇಕಾದ್ದ ರೀತಿಯಲ್ಲಿ ಅರ್ಥೈಸಿಕೊಂಡು ಸೋಶಿಯಲ್‌ ಮೀಡಿಯಾ ಮೂಲಕವಾಗಿ ದರ್ಶನ್‌ ಅವರ ಹೇಳಿಕೆ ಕುರಿತಾಗಿ ಬೇಸರ ಹೊರ ಹಾಕುತ್ತಿದ್ದಾರೆ.

 

 

ನಟ ದರ್ಶನ್‌ ಅವರು ಮೀಡಿಯಾ ಮುಂದೆ ಕ್ಷಮೆ ಕೇಳ ಬೇಕು. ಕ್ರಾಂತಿ ಸಿನಿಮಾ ಇಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ. ಕ್ರಾಂತಿ ಸಿನಿಮಾ ಮಾತ್ರವಲ್ಲ ದರ್ಶನ್‌ ಅವರ ಯಾವ ಸಿನಿಮಾಕ್ಕೂ ಅಭಿಮಾನಿಗಳ ಬೆಂಬಲ ಇರುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಅಪ್ಪು ಅಭಿಮಾನಿಗಳು ದರ್ಶನ್‌ ಅಭಿಮಾನಿಗಳಿಗೆ ಖಡಕ್‌ ಎಚ್ಚರಿಕೆನ್ನು ನೀಡಿದ್ದಾರೆ. ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ ಇಲ್ಲವಾದರೆ ಅವರೆ ಮುಂದೊಂದು ದಿನ ನಿಮ್ಮ ಮನೆಯ ಮೇಲೆ ಕಲ್ಲು ತೂರಾಟ ಮಾಡುತ್ತಾರೆ.

 

 

ಆಗ ನಿಮಗೆ ರಕ್ಷಣೆ ಬೇಕಾಗುತ್ತದೆ. ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಪು ಅಭಿಮಾನಿಗಳು ಹೇಳುತ್ತಿದ್ದಾರೆ. ನೆಟ್ಟಿಗರು ಮಾತ್ರ ದರ್ಶನ್‌ ಅವರು ಅಂತಾ ತಪ್ಪಾಗಿ ಏನು ಹೇಳಿಲ್ಲ. ನನಗೆ ಬದುಕಿದಾಗಲೇ ಅಭಿಮಾನಿಗಳ ಪ್ರತೀತಿ ಗೊತ್ತಾಗಿದೆ ಎಂದು ಹೇಳುವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದಾರೆ. ಆದರೆ ಅಲ್ಲಿ ಅಪ್ಪು ಹೆಸರು ಬಳಕೆ ಮಾಡಿದ್ದು ತಪ್ಪಾಗಿರಬಹುದು ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

 

 

ಇಷ್ಟೆಲ್ಲಾ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದರು, ದರ್ಶನ್‌ ಮಾತ್ರ ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನಾಗಿದ್ದಾರೆ. ಏನೇ ಆಗಲಿ ಅಭಿಮಾನಿಗಳು ಯಾವುದೇ ನಟ, ನಟಿಯರ ಹೇಳಿಕೆಯನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಮಾತು ಸಮಾಜ ಮೇಲೆ ಪರಿಣಾಮ ಬೀಳುತ್ತದೆ ಎನ್ನುವುದು ಮಾತ್ರ ಸತ್ಯವಾಗಿದೆ.

 

Leave a comment

Your email address will not be published.