ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ.

 

 

 

ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ – ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

 

 

ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.

 

 

ರಾಧಿಕಾ ಪಂಡಿತ್-ನಟ ಯಶ್ ಅವರ ಮುದ್ದು ಮಕ್ಕಳಿಬ್ಬರಿಗೆ ಮಹತ್ವದ ದಿನ. ಮಗಳು ಐರಾ ಮತ್ತು ಮಗನಿಗೆ ಇಂದು ಮಹತ್ವದ ದಿನವಾಗಿದೆ, ಹಾಗೆಂದು ಸ್ವತಃ ತಾಯಿ ರಾಧಿಕಾ ಪಂಡಿತ್ ಹೇಳಿದ್ದಾರೆ. ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ ಜೋರಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾದಂತೆ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

 

 

ಐರಾ ಮತ್ತು ಆಕೆಯ ತಮ್ಮನಿಗೆ ಇದು ಮಹತ್ವದ ರಕ್ಷಾ ಬಂಧನ. ಈ ರಕ್ಷಾ ಬಂಧನವನ್ನು ಅಮ್ಮನ ಮಾರ್ಗದರ್ಶನದಲ್ಲಿ ಆಚರಿಸಿದ್ದಾವೆ ಆ ಪುಟ್ಟು ಮುದ್ದು ಕಂದಗಳು. ತಮ್ಮ ಮಕ್ಕಳಿಬ್ಬರು ತಮ್ಮ ಮೊತ್ತ ಮೊದಲ ರಕ್ಷಾ ಬಂಧನ ಆಚರಿಸಿರುವ ಚಿತ್ರಗಳನ್ನು ರಾಧಿಕಾ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Radhika Pandit (@iamradhikapandit)

 

ಮುದ್ದು ಪುಟಾಣಿ ಐರಾ ವರ್ಷ ತುಂಬದ ಮುದ್ದು ತಮ್ಮನ ಕೈಗೆ ರಾಖಿ ಕಟ್ಟಿದ್ದಾಳೆ. ಅಷ್ಟೆ ಅಲ್ಲ ರಾಖಿ ಕಟ್ಟಿ ಸಿಹಿ ಮುತ್ತನ್ನು ಸಹ ಕೊಟ್ಟಿದ್ದಾಳೆ. ಅಕ್ಕ ಐರಾ ತಮ್ಮನಿಗೆ ರಾಖಿ ಕಟ್ಟಿ ಆರತಿ ಮಾಡಿದ್ದಾಳೆ. ಈ ಎಲ್ಲಾ ಚಿತ್ರಗಳನ್ನು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ರಾಖಿ ಹಬ್ಬಕ್ಕೆ ಈ ಚಿತ್ರಗಳು ಇನ್ನಷ್ಟು ಕಳೆ ತಂದಿವೆ.

Leave a comment

Your email address will not be published.