‘ಬಿಗ್ ಬಾಸ್​ ಒಟಿಟಿ ಕನ್ನಡ’ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲ ಸೀಸನ್ ಆದ್ದರಿಂದ ನಿರೀಕ್ಷೆಗಳು ಕೊಂಚ ಹೆಚ್ಚೇ ಇದೆ. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ.

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’. ಬಿಗ್ ಬಾಸ್ ಸೀಸನ್ 9ಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಬಹಿರಂಗವಾಗುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದರು. ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್‌ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ರಿವೀಲ್ ಆಗಿತ್ತು. ಈ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಮಾಹಿತಿ ನೀಡಿದ್ದರು. ಕಿಚ್ಚನ ಈ ಹೇಳಿಕೆ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು.

 

 

ಅಂದಹಾಗೆ ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ವಿಶೇಷವಾಗಿ ಮೂಡಿಬರಲಿದೆಯಂದೆ. ಈ ಬಾರಿ ಎರೆಡೆರಡು ಬಿಗ್ ಬಾಸ್ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಒಟಿಟಿಯಲ್ಲಿ ಮಿನಿ ಬಿಗ್ ಬಾಸ್ ಮತ್ತು ಕಲರ್ಸ್‌ ವಾಹಿನಿಯ ಬಿಗ್ ಬಾಸ್ ಎರೆಡು ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಕಲರ್ಸ್ ಸಂಸ್ಥೆ ಸಜ್ಜಾಗಿದೆ ಎನ್ನುವ ಮಾಹಿತಿ ಈಗಾಗಲೇ ಬಹಿಂಗವಾಗಿದೆ.

 

 

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಆಗಿದೆ. ಬಿಗ್ ಬಾಸ್ ಸೀಸನ್ 9ಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಗ್ಗೆ ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ಅಪ್ ಡೇಟ್ ನೀಡಿದ್ದಾರೆ. ಈಗಾಗಲೇ ಬಿಗ್ ಮನೆಯ ಕೆಲಸ ಪ್ರಾರಂಭವಾಗಿದೆ. ಬಿಗ್ ಬಾಸ್‌ನ ಹೈಲೆಟ್ ಗಳಲ್ಲಿ ಬಿಗ್ ಹೌಸ್ ಕೂಡ ಒಂದು. ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.

 

 

ಬಿಗ್ ಬಾಸ್ ಮನೆಯ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಪರಮೇಶ್ವರ್ ಗುಂಡ್ಕಲ್ ಬಹಿರಂಗ ಪಡಿಸಿದ್ದಾರೆ. ಫೋಟೋ ಶೇರ್ ಮಾಡುವ ಮೂಲಕ ಬಿಗ್ ಬಾಸ್ ಸೀಸನ್ 9 ಕೆಲಸ ಪ್ರಾರಂಭವಾಗಿದೆ ಎಂದಿದ್ದಾರೆ. ಬಿಗ್ ಮನೆಯ ಮುಂದೆ ನಿಂತು ಫೋಟೋ ಶೇರ್ ಮಾಡಿರುವ ಪರಮೇಶ್ವರ್ ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದಾರೆ.

 

 

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ವೂಟ್ ನಲ್ಲಿ ಪ್ರಸಾರವಾಗುವ ಮಿನಿ ಬಿಗ್ ಬಾಸ್ ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ಆರಂಭವಾಗಲಿದೆ. ಈ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಎಂದಿನಿಂತೆ ಸುದೀಪ್‌ ವಾರದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಿನಿ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್‌ ಬಾಸ್‌ನಲ್ಲಿ ಭಾಗವಹಿಸುತ್ತಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ 90 ದಿನಗಳ ಕಾಲ ಪ್ರಸಾರವಾಗಲಿದೆ.

 

 

ಇತ್ತೀಚಿಗಷ್ಟೇ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ ಮತ್ತು ಸ್ಪರ್ಧಿಗಳ ವಿಚಾರವಾಗಿ ಸಹ ಮಾತನಾಡಿದರು. ಇದರ ಬೆನ್ನಲ್ಲೇ ಬಿಗ್ಬಾಸ್ ಪ್ರಿಯರಿಗೆ ಯಾರು ಈ ಸಾರಿ ಬಿಗ್ಬಾಸ್ ಮನೆ ಸೇರುತ್ತಾರೆ ಎನ್ನುವ ಚರ್ಚೆ ಈಗಾಗಲೇ ಆರಂಭವಾಗಿದೆ. ಜೊತೆಗೆ ಮೂಲಗಳ ಪ್ರಕಾರ ಚಿರಂಜೀವಿ ಸರ್ಜಾ ಪತ್ನಿ ಮೇಘನಾರಾಜ್ ಅವರಿಗೂ ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಅವಕಾಶ ಹೊಗಿತ್ತಂತೆ ಎಂದು ತಿಳಿದುಬಂದಿದೆ.

 

 

ಪರಮೇಶ್ವರ್ ಗುಂಡ್ಕಲ್ ಅವರು ಮೇಘನಾ ರಾಜ್ ಅವರ ಮನೆಗೆ ಹೋಗಿ, ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರುತ್ತೀರಾ ಎಂದು ಕೇಳಿದ್ದರಂತೆ. ಹಾಗೆ ಚಿರು ಇಲ್ಲದ ನೋವಿನಲ್ಲಿ ಮೇಘನಾ ಇದ್ದಾರೆ. ಹಾಗಾಗಿ ಅವರಿಗೆ ಬ್ರೇಕ್ ಸಿಕ್ಕಂತಾಗುವುದು ಎಂದು ಬಿಗ್ ಬಾಸ್ ಮನೆಗೆ ಬರಲು ಮನವಿ ಮಾಡಿಕೊಂಡರಂತೆ. ಈ ವಿಚಾರಕ್ಕೆ ಚಿರು ಪತ್ನಿ ಮೇಘನಾ ರಾಜ್ ಕೂಡ ಪ್ರತಿಕ್ರಿಯಿಸಿದ್ದು, ಒಂದು ವಾರ ಪರಮೇಶ್ವರ್ ಅವರ ಬಳಿ ಸಮಯ ಕೇಳಿದ್ದರಂತೆ. ಹಾಗೂ ತಮ್ಮ ತಂದೆ ಸುಂದರರಾಜ್ ಹಾಗೂ ನಟ ಧ್ರುವ ಸರ್ಜಾ ಜೊತೆ ಚರ್ಚೆ ಮಾಡಿ ಒಂದು ನಿರ್ಧಾರವನ್ನು ತೆಗೆದುಕೊಂಡು, ‘ಇಲ್ಲ ಪರಂ ಅವರೇ, ನನ್ನ ತಲೆಯಲ್ಲಿ ಸದ್ಯಕ್ಕೆ, ನನ್ನ ಮಗು ರಾಯನ್ ಬಗ್ಗೆ ಮಾತ್ರ ಯೋಚನೆ ಇದ್ದು.

 

 

ಸದ್ಯಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗಲು ರೆಡಿ ಇಲ್ಲ, 90 ದಿವಸಗಳ ಕಾಲ ಪುಟ್ಟ ಮಗುವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಂದಿನ ವರ್ಷ ಖಂಡಿತ ಬರುತ್ತೇನೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಮೂಲಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲು ನಟಿ ಮೇಘನಾ ರಾಜ್ ಅವರಿಗೆ ಅವಕಾಶ ಬಂದಿದ್ದು ನಿಜ, ಆದ್ರೆ ಮೇಘನಾ ರಾಜ್ ಅವರು ‘ಇಲ್ಲ, ಈ ಬಾರಿ ನನ್ನ ಮನಸ್ಥಿತಿ ಬಿಗ್ ಬಾಸ್ ಗೆ ಹೋಗಲು ಸರಿ ಇಲ್ಲ’ ಎಂದು ಹೇಳುತ್ತಾ ‘ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲವೆಂದು ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Leave a comment

Your email address will not be published.