ತನ್ನ ಸೌಂದರ್ಯದ ಮೂಲಕವೇ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದ ನಟಿ ನಮಿತಾ ಅವರು ಪರದೆ ಮೇಲೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಇವರು ತಮ್ಮ ವೃತ್ತಿ ಜೀವನವನ್ನು ಸ್ವಂತಂ ಸಿನಿಮಾ ಮೂಲಕ ಪ್ರಾರಂಭಿಸಿದರು. ಆದರೆ ಜೆಮಿನಿ ಮತ್ತು ಬಿರ್ಲಾ ಚಿತ್ರಗಳು ಮಾತ್ರ ಆಕೆಗೆ ಹೆಚ್ಚು ಹೆಸರನ್ನು ತಂದುಕೊಟ್ಟವು.

 

 

ನಟಿ ನಮಿತಾ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ವೇಳೆ ತಳ್ಳಗೆ ಬೆಳ್ಳಗೆ ಕಾಣಿಸುತ್ತಿದ್ದರು. ಆದರೆ ಸ್ವಲ್ಪ ವರ್ಷಗಳ ಬಳಿಕ ಅವರು ಸಿಕ್ಕಾಪಟ್ಟೆ ದಪ್ಪ ಆದರು. ೨೦೧೭ರಲ್ಲಿ ನಟಿ ನಮಿತಾ ಅವರು ತಮ್ಮ ಗೆಳೆಯ ವೀರೇಂದ್ರ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು.

 

 

ಅವರು ಹೇಳಿದಂತೆ ತಮ್ಮ ಬಹು ಕಾಲದ ಗೆಳೆಯ ವೀರೇಂದ್ರ ಅವರ ಜೊತೆಗೆ ೨೦೧೭ರ ನವೆಂಬರ್ ವೇಳೆಗೆ ಹಸೆಮಣೆ ಏರಿದರು. ಮದುವೆಯಾದ ಬಳಿಕ ಅವರು ಬೆಳ್ಳಿ ಪರದೆಯಿಂದ ದೂರ ಸರಿದರು. ಆದರೆ ಕೆಲ ಸಮಯದ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ ನೀಡಿದರು. ಇತ್ತೀಚೆಗೆ ನಟಿ ನಮಿತಾ ಅವರು ಇತ್ತೀಚೆಗೆ ಮದ್ಯಪಾನ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಹಾಗಾಗಿ ಅವರು ತುಂಬಾ ದಪ್ಪ ಆಗಿದ್ದಾರೆ ಎಂಬ ಗಾಸಿಪ್ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಓಡಾಡಿತ್ತು. ಆದರೆ ನಟಿ ನಮಿತಾ ಅವರು ತಮ್ಮ ಮೇಲೆ ಬಂದ ಗಾಸಿಪ್ ಕುರಿತಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

 

 

ನಟಿ ನಮಿತಾ ಅವರು ಇನ್ ಸ್ಟಾಗ್ರಾಂ ನಲ್ಲಿ ಸ್ಪಷ್ಟನೆ ನೀಡಿದ್ದು, ತಮ್ಮ ತೂಕ ಹೆಚ್ಚಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಥೈರಾಯ್ಡ್ ಹಾಗೂ ಪಿಸಿಒಡಿ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ತೂಕ ಹೀಗೆ ಹೆಚ್ಚಾಗಿದೆ. ಅದನ್ನು ಹೊರತುಪಡಸಿ ಯಾವುದೇ ಬೇರೆ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

ಅಲ್ಲದೇ, ನಟಿ ನಮಿತಾ ಅವರು ತಮ್ಮ ವಾಸ್ತವ ದೇಹದ ತೂಕವನ್ನು ಮರೆ ಮಾಚದೇ ನಿಜ ಹೇಳಿದ್ದಾರೆ. ನಟಿ ನಮಿತಾ ಅವರ ಇಂದಿನ ತೂಕ ೯೬ ಕೆಜಿ ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದಾಗಿ ಮಾನಸಿಕವಾಗಿ ಸಾಕಷ್ಟು ಬಳಲಿ ನನ್ನ ಜೀವನವನ್ನೇ ಕೊನೆಗೊಳಿಸಬೇಕೆಂದು ಬಯಸಿದ್ದೆ. ಆದರೆ ಯೋಗಾಭ್ಯಾಸವನ್ನು ಮಾಡುವ ಮೂಲಕ ಆ ಆಲೋಚನೆಗಳಿಂದ ದೂರ ಇದ್ದೇನೆ. ಯೋಗಾಭ್ಯಾಸ ಪ್ರಾರಂಭ ಮಾಡಿದಾಗಿನಿಂದ ಸಂತೋಷವಾಗಿದ್ದೇನೆ.

 

 

ಅಲ್ಲದೇ, ನಾನು ಈಗ ಬಹಳ ಸುಖ ಹಾಗೂ ಶಾಂತಿಯಿಂದ ನನ್ನ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಟಿ ನಮಿತಾ ಅವರು ತೆಲುಗು ಮಾತ್ರವಲ್ಲದೇ ಕನ್ನಡ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವರು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನೀಲಕಂಠ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು.

 

 

ಆ ನಂತರ ಇವರು ಹೂವು, ಬೆಂಕಿ ಬಿರುಗಾಳಿ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇವರು ತೆಲುಗು ಮಾತ್ರವಲ್ಲದೇ, ತಮಿಳು, ಮಲೆಯಾಳಂ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ಬೆಳ್ಳಿಪರದೆ ಮಾತ್ರವಲ್ಲದೇ, ಕಿರುತೆರೆಯ ಮೇಲೂ ಕಾಣಿಸಿಕೊಂಡಿದ್ದರು. ತಮಿಳು ಬಿಗ್ ಬಾಸ್ ನ ಸೀನಸ್ ೧ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಡ್ಯಾನ್ಸ್ ಜೋಡಿ ಡ್ಯಾನ್ಸ್ ನ ತೀರ್ಪುಗಾರರಾಗಿಯೂ ಆಯ್ಕೆಯಾಗಿದ್ದರು.

Leave a comment

Your email address will not be published.