ಸಿನಿಮಾ ಮಾತ್ರವಲ್ಲದೇ ಅಕ್ಷಯ್ ಸಹಾಯ ಮಾಡುವುದರಲ್ಲೂ ಎತ್ತಿದ ಕೈ. ಕೊರೋನಾ ಸಂಕಷ್ಟದ ಸಮಯದಲ್ಲಿ 25 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡುವುದು ಮಾತ್ರವಲ್ಲದೇ ಸಂಕಷ್ಟದಲ್ಲಿರುವ ಬಡ ಜನರಿಗೆ ಸಹಾಯ ಹಸ್ತ ಚಾಚಿರುವುದು ಇದಕ್ಕೆ ಉದಾಹರಣೆಯಾಗಿದೆ.

 

 

ಅಕ್ಷಯ್ ಕುಮಾರ್ ಅವರು ದುಬಾರಿ ಬೆಲೆಯ ಕಾರುಗಳನ್ನು ಓಡಿಸುತ್ತಾರೆ. ಅವರು ಸಾಮಾನ್ಯವಾಗಿ ಶೂಟಿಂಗ್ ಸೆಟ್​ಗೆ ಬರುವಾಗ ಬೈಕ್ ನಲ್ಲೇ ಬರುತ್ತಾರೆ. ಅಷ್ಟೇ ಏಕೆ ಅಕ್ಷಯ್ ಅವರ ಬಳಿ ಸ್ವಂತ ವಿಮಾನವೇ ಇದೆ. ಎಂದರೆ ನಿವು ನಂಬಲೇಬೇಕು. ಆ ವಿಮಾನದ ಬೆಲೆ ಎಷ್ಟು ಗೊತ್ತಾ?

 

 

ಅಕ್ಷಯ್ ಬಳಿ ಸ್ವಂತ ವಿಮಾನವಿದೆ. ಸಿನಿಮಾ ಪ್ರಚಾರದ ವೇಳೆ ಅಥವಾ ಖಾಸಗಿ ಕಾರ್ಯಕ್ರಮಕ್ಕೆ ಹೋಗುವ ವೇಳೆ ಸ್ವಂತ ವಿಮಾನವನ್ನು ಅಕ್ಷಯ್ ಬಳಸುತ್ತಾರೆ. ಈ ಸ್ವಂತಕ್ಕೆ ಖರೀದಿ ಮಾಡಿರುವ ವಿಮಾನದ ಬೆಲೆ ಬರೋಬ್ಬರಿ 260 ಕೋಟಿ ರೂ.

ಇಷ್ಟೆಲ್ಲಾ ಹಣ, ಆಸ್ತಿ ಇದ್ದರೂ ಕೂಡ ಅಕ್ಷಯ್ ಸಾಮಾನ್ಯ ವ್ಯಕ್ತಿಯಂತೆ ಜೀವನ ನಡೆಸುತ್ತಾರೆ. ತಮ್ಮ ಅಭಿಮಾನಿಗಳ ಜೊತೆಗೆ ಉತ್ತಮ ಭಾಂದವ್ಯವನ್ನು ಹೊಂದಿರುತ್ತಾರೆ. ಅವರಿಗೆ ಎಂದಗೂ ಪ್ರೀತಿಯನ್ನು ತೋರಿಸುತ್ತಾರೆ. ಬದಲಾಗಿ ಅಹಂಕಾರವನ್ನು ಪ್ರದರ್ಶನ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ನಟ ಅಕ್ಷಯ್ ಕುಮಾರ್​ ಅವರನ್ನು ಕಂಡರೆ ಬಹುತೇಕ ಮಂದಿ ಇಷ್ಟ ಪಡುತ್ತಾರೆ.

 

 

ನಟ ಅಕ್ಷಯ್ ಕುಮಾರ್ ಅವರು ಸಿನಿಮಾ ಮಾತ್ರವಲ್ಲದೇ, ಜಾಹೀರಾತುಗಳಲ್ಲಿ ನಟಿಸುತ್ತಾರೆ. ಸಿನಿಮಾದಿಂದ ಬರುವ ಆದಾಯ ಒಂದೆಡೆಯಾದರೆ, ಸಿನಿಮಾಗಳಿಂದಲೂ ಆದಾಯವನ್ನು ಗಳಿಸುತ್ತಾರೆ. ಇವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನಾ ಅವರು ಹೋಟೆಲ್ ನಲ್ಲಿ ಅಡುಗೆ ಕೆಲಸವನ್ನು ಮಾಡುತ್ತಿದ್ದರು.

 

 

ಅಕ್ಷಯ್ ಅವರು ಸಾಮಾಜಿಕ ಜಾಹೀರಾತುಗಳ ಹೊರತಾಗಿಯೂ ಕಮರ್ಷಿಯಲ್ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಎಫ್ಎಂಸಿಜೆ ಬ್ರಾಂಡ್ ಲಕ್ಷುರಿ ಉತ್ಪನ್ನಗಳಿಲ್ಲಿ ಮತ್ತು ಸರ್ಕಾರಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇವರು ಸ್ಯಾನಿಟರಿ ಪ್ಯಾಡ್ ಗಳ ಜಾಹೀರಾತಿನಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇವರು ಪ್ಯಾಡ್ ಮನ್ ಸಿನಿಮಾದಲ್ಲಿ ನಟಿಸುವ ಮೂಲಕ ಸಮಾಜದಲ್ಲಿ ಹೊಸ ರೀತಿಯ ಬದಲಾವಣೆಗೆ ಹೊಸ ದಿಕ್ಕನ್ನು ತೋರಿಸಿದರು.

 

 

ಪೋರ್ಬ್ಸ್ ಮ್ಯಾಗಝೀನ್ ಬಿಡುಗಡೆ ಮಾಡಿದ ಜಗತ್ತಿನ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟರ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ್​ ಅವರ ಒಂದು ದಿನಕ್ಕೆ ಕೋಟಿಗಟ್ಟಲೇ ಆದಾಯ ಗಳಿಸುತ್ತಾರೆ. ಇನ್ನು ಅವರ ಬ್ರಾಂಡ್ ವಾಲ್ಯೂ 742 ಕೋಟಿ ರೂಪಾಯಿಯಷ್ಟಿದೆ.

Leave a comment

Your email address will not be published.