ಕಳೆದ ನಾಲ್ಕು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿನ್ನರಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಮಣಿ ಎಂಬ ಪ್ರಮುಖ ನಟಿಯ ಬಾಲ್ಯ ಹಾಗೂ ಯೌವ್ವನದ ಹಂತಗಳನ್ನು ತೋರಿಸಲಾಗಿತ್ತು. ಒಬ್ಬ ವ್ಯಕ್ತಿ ಮದುವೆ ಮಾಡಿಕೊಂಡು ಮಗು ಪಡೆದ ನಂತರ ತನ್ನ ಹಂಡತಿಯನ್ನು ತೊರೆದು ಹೋಗುತ್ತಾನೆ. ಆ ನಂತರ ಶ್ರೀಮಂತ ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿಕೊಂಡು ಜೀವನ ಮಾಡುತ್ತಿರುತ್ತಾನೆ.

 

 

ಎರಡನೇ ಮದುವೆಯಾದ ನಂತರ ಆಕೆಗೆ ಮಕ್ಕಳಾಗುತ್ತಾರೆ. ಸಂಸಾರ ದೊಡ್ಡದಾಗುತ್ತದೆ. ಇದೇ ವೇಳೆ ಹಳ್ಳಿಯಲ್ಲಿ ಮೊದಲನೇ ಹೆಂಡತಿ ತನ್ನ ಗಂಡನ ಬರುವಿಕೆಗಾಗಿ ಕಾಯುತ್ತಲೇ ಜೀವನ ದೂಡುತ್ತಿರುತ್ತಾಳೆ. ಒಂದು ದಿನ ಆಕೆ ಕಾಯಿಲೆಗೆ ತುತ್ತಾಗಿ ಅಸುನೀಗುತ್ತಾಳೆ. ಇದನ್ನು ಅರಿತ ಗಂಡ ತನ್ನ ಮಗಳನ್ನು ಪ್ರಸ್ತುತ ವಾಸವಿರುವ ಮನೆಗೆ ಕರೆದುಕೊಂಡು ಬರುತ್ತಾನೆ. ಅಲ್ಲಿ ತನ್ನ ಮಗಳು ಎಂದು ಹೇಳಲಾಗದೇ ಮನೆ ಕೆಲಸದ ಹುಡುಗಿ ಎಂದು ಹೇಳಿಕೊಂಡಿರುತ್ತಾನೆ.

 

 

ಆ ಚಿಕ್ಕ ಹುಡುಗಿ ತನ್ನ ಬದುಕಿನಲ್ಲಿ ಎದುರಿಸುವ ಕಷ್ಟ, ನೋವು, ತಂದೆ ತಾಯಿ ಕಳೆದುಕೊಂಡ ನಂತರ ಹೇಗೆಲ್ಲಾ ತನ್ನ ಬದುಕನ್ನು ಮುನ್ನೆಡೆಸುತ್ತಾಳೆ ಎಂಬುದೇ ಈ ಧಾರಾವಾಹಿಯ ಕಥಾವಸ್ತುವಾಗಿತ್ತು. ಇಂತಹ ಧಾರಾವಾಹಿಯಲ್ಲಿ ಮಣಿ ಎಂಬ ಪಾತ್ರದಲ್ಲಿ ಚಿಕ್ಕ ಹುಡುಗಿ ಕಾಣಿಸಿಕೊಂಡಿದ್ದಳು. ಈ ಹುಡುಗಿಯ ನಿಜವಾದ ಹೆಸರು ದಿಶಾ. ದಿಶಾ ಮೈಸೂರಿನಲ್ಲಿ ೧ನೇ ತರಗತಿ ಓದುತ್ತಿದ್ದ ವೇಳೆಯಲ್ಲಿ ಕಿನ್ನರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಳು. ಈಕೆ ಓದಿನಲ್ಲೂ ಚುರುಕಾಗಿದ್ದಳು. ಮುಂದೆ ದೊಡ್ಡವಳಾಗಿ ಡಾಕ್ಟರ್ ಆಗಬೇಕೆಂದು ಬಯಸಿದ್ದಳು.

 

 

ಅಮ್ಮನಿಗೆ ತನ್ನ ಮಗಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಆಸೆ ಪಟ್ಟಿದ್ದರು. ಇದೇ ವೇಳೆ ಕಿನ್ನರಿ ಎಂಬ ಧಾರಾವಾಹಿಯೂ ಪ್ರಾರಂಭವಾಗುವುದರಲ್ಲಿತ್ತು. ಬೆಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಈಕೆ ಆಯ್ಕೆಯಾಗಿದ್ದಳು. ಈ ಆಡಿಷನ್ ವೇಳೆ ೨೦೦ ಮಕ್ಕಳು ಪಾಲ್ಗೊಂಡಿದ್ದರು. ನಟನೆ ಬಗ್ಗೆ ಯಾವುದೇ ಗಂಧಗಾಳಿ ಗೊತ್ತಿಲ್ಲದೇ ಇದ್ದರೂ, ಈಕೆ ಧಾರಾವಾಹಿಗೆ ಆಯ್ಕೆಯಾಗಿದ್ದಳು.

 

 

ಬಿಗ್ ಬಾಸ್ ಸೀಸನ್ ೩ ನಡೆಯುತ್ತಿದ್ದ ವೇಳೆ ೧ ದಿನ ಆ ಮನೆಯಲ್ಲಿ ಕಾಲ ಕಳೆದಿದ್ದಳು. ಸುದೀಪ್ ಎಂದರೆ ಬಹಳ ಇಷ್ಟ ಎಂಬ ಕಾರಣಕ್ಕಾಗಿ ಅದೇ ಮನೆಯಲ್ಲಿ ಇರುತ್ತೇನೆ ಎಂದು ಹಠ ಮಾಡಿದ್ದಳಂತೆ. ಮಾಜಾ ಟಾಕೀಸ್ ಕಾರ್ಯಕ್ರಮದಲ್ಲೂ ದಿಶಾ ಭಾಗವಹಿಸಿದ್ದಳು. ವೆಸ್ಟ್ರನ್ ಡ್ಯಾನ್ಸ್ ಮತ್ತು ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಈಕೆ ಕಿನ್ನರಿ ದಿಶಾ ಎಂಬ ಹೆಸರಿನ ಸಾಮಾಜಿಕ ಜಾಲತಾಣವನ್ನು ಹೊಂದಿದ್ದಾರೆ. ಪ್ರಸ್ತುತ ದಿಶಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.

Leave a comment

Your email address will not be published.