ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ತಮ್ಮದೇ ಆದ ಗಾಯನ ಶೈಲಿಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಗಾಯಕ ಎಂದರೆ ವಿಜಯ್ ಪ್ರಕಾಶ್ ಅವರು. ವಿಜಯ್ ಅವರು ಹಿಂದಿ, ತಮಿಳು, ತಮಿಳು ಭಾಷೆಯ ಸಿನಿಮಾಗಳನ್ನು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೇ, ಕನ್ನಡ ಸಿನಿಮಾ ಲೋಕದಲ್ಲಿ ವಿಜಯ್ ಪ್ರಕಾಶ್ ಅವರು ಮನೆ ಮಾತಾಗಿರುವ ಗಾಯಕ.

 

 

ಇವರು ಸಿನಿಮಾ ಮಾತ್ರವಲ್ಲದೇ, ಜಾಹೀರಾತುಗಳಿಗೂ ತಮ್ಮ ಹಿನ್ನಲೆ ಧ್ವನಿಯನ್ನು ನೀಡಿದ್ದಾರೆ. ಇವರ ಪತ್ನಿಯೂ ಕೂಡ ಹಿನ್ನಲೆ ಧ್ವನಿಯನ್ನು ಬಹುತೇಕ ಜಾಹೀರಾತುಗಳಿಗೆ ನೀಡಿದ್ದಾರೆ. ಆ ಮೂಲಕವೇ ಅವರು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಸಾಕಷ್ಟು ಸೀಸನ್ ಗಳಿಂದ ಕೆಲಸ ಮಾಡುತ್ತಿದ್ದಾರೆ.

 

 

ಎ. ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲಿ ತಯಾರಾದ ಆಸ್ಕರ್ ಪ್ರಶಸ್ತಿ ಹಾಗೂ ಗ್ರ್ಯಾಮಿ ಪ್ರಶಸ್ತಿ ಪಡೆದುಕೊಂಡ ಜೈ ಹೋ ಹಾಡಿಗೆ ಇವರು ಧ್ವನಿಯಾಗಿದ್ದಾರೆ. ಆ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಲು ಕಾರಣವಾಯಿತು. ಇವರು ಮೂಲತಃ ಮೈಸೂರಿನವರು. ಆದರೆ ಹಾಡಬೇಕು ಎಂಬ ಹಂಬಲದೊಂದಿಗೆ ದೂರದ ಮುಂಬೈಗೆ ಹೋಗುತ್ತಾರೆ. ಅಲ್ಲಿ ಸಾಕಷ್ಟು ಕಷ್ಟಪಟ್ಟ ನಂತರ ಅವರು ಎ. ಆರ್. ರೆಹಮಾನ್ ಅವರ ಪರಿಚಯವಾಗುತ್ತದೆ. ಅಲ್ಲದೇ, ವಿಜಯ್ ಅವರ ಪ್ರತಿಭೆಯೂ ಅವರಿಗೆ ಮೆಚ್ಚುಗೆಯಾಗುತ್ತದೆ.

 

 

ಗಾಯಕ ವಿಜಯ್ ಪ್ರಕಾಶ್ ಅವರು ೨೦೦೧ರಲ್ಲಿ ಮಹತಿ ಎಂಬುವರನ್ನು ವಿವಾಹ ಮಾಡಿಕೊಂಡಿದ್ದರು. ಈಗಾಗಲೇ ಹೇಳಿದಂತೆ ಆಕೆಯೂ ಕೂಡ ಜಾಹೀರಾತುಗಳಿಗೆ ಹಿನ್ನಲೆ ಧ್ವನಿಯನ್ನು ನೀಡುತ್ತಿದ್ದರು. ಈ ದಂಪತಿಗೆ ಕಾವ್ಯಾಶ್ರೀ ಎಂಬ ಮಗಳಿದ್ದಾಳೆ. ಈಕೆ ಕೂಡ ಸಂಗೀತ ಅಭ್ಯಾಸ ಮಾಡುತ್ತಿದ್ದು, ತಂದೆಗೆ ತಕ್ಕ ಮಗಳು ಎನಿಸಿಕೊಂಡಿದ್ದಾಳೆ.

 

 

ವಿಜಯ್ ಪ್ರಕಾಶ್ ಅವರಿಗೆ ಮಗಳು ಎಂದರೆ ಬಹಳ ಇಷ್ಟ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯವಾಗಿರುತ್ತಾರೆ. ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ ಮಗಳೊಂದಿಗೆ ಇರುವ ಫೋಟೊಗಳನ್ನು ಸಾಕಷ್ಟು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ವಿಜಯ್ ಪ್ರಕಾಶ್ ಅವರು ತಮ್ಮ ಮಗಳೊಂದಿಗೆ ಅಡುಗೆ ಮಾಡುತ್ತಿರುವ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು. ಅಡುಗೆ ಮಾಡಲು ಹೊಸ ಶೆಫ್ ಸಿಕ್ಕಿದ್ದಾರೆ ಹಾಗಾಗಿ ಅಡುಗೆ ಮಾಡಲು ಬಹಳ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದರು.

Leave a comment

Your email address will not be published.