ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಸಂತೋಷ ನಗು ಎಲ್ಲವೂ ತುಂಬಿರುತ್ತದೆ. ಯಾವಾಗಲೂ ಅವರು ಖುಷಿಯಾಗಿ ಇರುವುದರ ಜೊತೆಗೆ ತಮ್ಮ ಜೊತೆಗೆ ಇರುವವರನ್ನು ಖುಷಿಯಾಗಿ ಇರಿಸುತ್ತಾರೆ. ಅವರು ಇದ್ದ ಕಡೆಯೆಲ್ಲಾ ಸಂತೋಷ ಎಂಬುದು ಕಾಲು ಮುರಿದುಕೊಂಡು ಬಿದ್ದಿರುತ್ತದೆ. ಅದೇ ಕಾರಣಕ್ಕೆ ಮಕ್ಕಳಿರಲವ್ವಾ ಮನೆ ತುಂಬಾ ಎಂದು ಜಾನಪದ ಹಾಡುಗಳಲ್ಲಿ ಹೇಳಲಾಗುತ್ತಿತ್ತು.

 

 

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಕೇಳಬೇಕಾ? ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತಾರೆ. ಅವರು ಆಡುವ ಆಟ, ಮಾಡುವ ತುಂಟಾಟ ಎಲ್ಲವೂ ವೈರಲ್ ಆಗುತ್ತದೆ. ಈಗಂತೂ ಬಿಡಿ ಸಾಮಾಜಿಕ ಮಾಧ್ಯಮಗಳು ಎಲ್ಲರ ಬಳಿಯೂ ಇದೆ. ಹಾಗಾಗಿ ಮಕ್ಕಳ ಆಟ, ಪಾಠಗಳನ್ನು ನೋಡಿದ ಪ್ರತಿಯೊಬ್ಬರೂ ಲೈಕ್ ಕೊಡುತ್ತಾರೆ. ಅದೇ ಕಾರಣಕ್ಕೆ ಮಕ್ಕಳ ವೀಡಿಯೋ, ಆಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ.

 

 

View this post on Instagram

 

A post shared by Radhika Pandit (@iamradhikapandit)

 

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಅವರ ಇಬ್ಬರು ಮಕ್ಕಳು ಅವರಿಗಿಂತ ಹೆಚ್ಚು ಫೇಮಸ್ ಆಗಿಬಿಟ್ಟಿದ್ದಾರೆ ಎಂದರೆ ನೀವು ನಂಬಲೇಬೇಕು. ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮಗಳು ಐರಾ ಯಶ್ ಹಾಗೂ ಯಥರ್ವ ಅವರಿಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲಾ ಕಾಲಕ್ಕೂ ಸುದ್ದಿಯಲ್ಲಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

 

 

View this post on Instagram

 

A post shared by Radhika Pandit (@iamradhikapandit)

 

ಸಾಮಾನ್ಯವಾಗಿ ರಾಧಿಕಾ ಪಂಡಿತ್ ಅವರು ತಮ್ಮ ಇಬ್ಬರು ಮಕ್ಕಳ ತುಂಟಾಟದ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಪ್ರತಿ ವೀಡಿಯೋಗೂ ಲಕ್ಷಗಟ್ಟಲೇ ಲೈಕ್ ಗಳು ಬರುತ್ತವೆ. ಇಲ್ಲಿಯೂ ಕೂಡ ಐರಾ ತನ್ನ ತಮ್ಮ ಯಥರ್ವ ನನ್ನು ತಟ್ಟಿ ಮಲಗಿಸುವ ಹಾಗೂ ಯಶ್ ಅವರು ಮಗನ ಜೊತೆಗೆ ಜಾನಿ ಜಾನಿ ಹಾಡನ್ನು ಹೇಳುವುದು ಅದಕ್ಕೆ ಮಗ ಪ್ರತಿಕ್ರಿಯೆ ನೀಡುವುದು ಇದೆಲ್ಲವನ್ನೂ ನೋಡಿದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಅದಕ್ಕೇ ಹೇಳಿದ್ದು ಮಕ್ಕಳಿರಲವ್ವಾ ಮನೆ ತುಂಬಾ ಎಂದು. ನಮ್ಮ ಹಿರಿಯರು ಮಾಡಿದ ಮಾವ ಮಾತೂ ಸುಳ್ಳಾಗಿರಲು ಸಾಧ್ಯವಿಲ್ಲ. ಆದರೆ ಅದನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳುವ ಚಾಕಚಕ್ಯತೆ ನಮಗೆ ಬೇಕಷ್ಟೇ.

 

 

View this post on Instagram

 

A post shared by Radhika Pandit (@iamradhikapandit)

 

ಅದೇನೇ ಇರಲಿ ಐರಾ ಮತ್ತು ಯಥರ್ವ ಅವರ ತುಂಟಾಟದ ವೀಡಿಯೋಗಳನ್ನು ನೀವು ಈಗಾಗಲೇ ನೋಡಿ ಸಂತೋಷ ಪಟ್ಟಿರಬೇಕು. ಮತ್ತೊಂದು ವೀಡಿಯೋವನ್ನು ನೋಡಿ. ಐರಾ ತನ್ನ ತಮ್ಮನಿಗೆ ಜೋ ಜೋ ಹೇಳಿ ಮಲಗಿಸುವ ಪರಿಯನ್ನು ನೋಡಿದರೆ ಎಂತಹಾ ಅಮ್ಮನಿಗೂ ಒಂದು ಕ್ಷಣ ಅಸೂಯೆಯಾಗಬಹುದು. ಮತ್ತೆ ಕೆಲವರಿಗೆ ನಮಗೂ ಇಂತಹದ್ದೇ ಒಬ್ಬ ಮಗಳು ಇರಬಾರದಿತ್ತಾ ಎಂದು ಎನಿಸಿದರೆ ಆಶ್ಚರ್ಯವಿಲ್ಲ.

Leave a comment

Your email address will not be published.