ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋನ ೫ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರು ಇದೇ ವರ್ಷ ರೋಹನ್ ರಾಘವೇಂದ್ರ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 

 

ಈ ನಟಿ ಜೊತೆ ಜೊತೆಯಲಿ ಧಾರಾವಾಹಿಯ ಮೊದಲ ಸೀಸನ್ ನಲ್ಲಿ ಶಿಕ್ಷಕಿಯೊಬ್ಬಳು ತನ್ನ ಶಿಷ್ಯನನ್ನೇ ಮದುವೆಯಾಗುವ ಪಾತ್ರದಲ್ಲಿ ನಟಿಸಿದ್ದರು. ನಟಿ ಆಶಿತಾ ಅವರ ಮದುವೆ ಬಹಳ ಅದ್ಧೂರಿಯಾಗಿ ನಡೆದರೂ ಅಲ್ಲಿ ಸಾಕಷ್ಟು ಜನರು ಭಾಗವಹಿಸಲು ಅವಕಾಶವಿರಲಿಲ್ಲ. ಏಕೆಂದರೆ ದೇಶದಲ್ಲಿ ಕೊರೊನಾ ಕಾರಣದಿಂದಾಗಿ ಛತ್ರಗಳಲ್ಲಿ ಹೆಚ್ಚು ಜನರು ಸೇರಲು ಅವಕಾಶವಿರಲಿಲ್ಲ. ಹಾಗಾಗಿ ಅವರು ತಮ್ಮ ಕುಟುಂಬದ ಆಪ್ತ ವಲಯ ಹಾಗೂ ಕೆಲವೇ ಮಂದಿ ಸ್ನೇಹಿತರ ಸಮ್ಮುಖದಲ್ಲಿ ವಿವಾಹವನ್ನು ಮಾಡಿಕೊಂಡರು.

 

 

 

ನಟಿ ಆಶಿತಾ ಅವರು ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ರಾಣಿ ಎಂಬ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಮೂಲತಃ ಕೊಡಗಿನವರಾದ ಆಶಿತಾ ಚಂದ್ರಪ್ಪ ಜೊತೆಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾದವರು. ರಾಧಾ-ರಮಣ ಧಾರಾವಾಹಿ ಬಳಿಕ ಆಶಿತಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಬಿಗ್ ಬಾಸ್​ ಕನ್ನಡ ಸೀಸನ್ 5ರ ಸ್ಪರ್ಧಿಯಾಗಿದ್ದ ಆಶಿತಾ ತಮ್ಮ ಸಹಸ್ಪರ್ಧಿಗಳಾಗಿದ್ದವರ ಜೊತೆ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.

 

 

 

ಬಿಗ್​ಬಾಸ್​ 5ನೇ ಸೀಸನ್ ಮುಗಿದ ನಂತರವೂ ಆ ಸೀಸನ್​ನ ಸ್ಪರ್ಧಿಗಳೆಲ್ಲ ಹಲವು ಬಾರಿ ಒಂದೆಡೆ ಸೇರಿದ್ದ ಫೋಟೋಗಳು ವೈರಲ್ ಆಗಿತ್ತು. ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಆಶಿತಾ ಹಾಗೂ ರೋಹನ್ ಮದುವೆ ನಡೆದಿದೆ. ಸದ್ದಿಲ್ಲದೆ ಮದುವೆಯಾದ ಆಶಿತಾ ತಮ್ಮ ಮದುವೆಯ ಫೋಟೋಗಳನ್ನು ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಶಿತಾ ಅವರ ಮದುವೆಗೆ ನಟರಾದ ಜಗನ್ನಾಥ್, ತೇಜಸ್ವಿನಿ ಪ್ರಕಾಶ್, ಜೆಕೆ ಬಂದು ಶುಭ ಹಾರೈಸಿದ್ದಾರೆ.

 

 

 

‘ಸ್ವಯಂವರ’ ಎಂಬ ಸಿನಿಮಾದಲ್ಲಿ ಆಶಿತಾ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 5ರ ಶೋನಲ್ಲಿ ಆಶಿತಾ ಭಾಗವಹಿಸಿದ್ದರು. ಇನ್ನು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರನ್ನು ಅಣ್ಣ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ಆಶಿತಾ ಪ್ರತಿಕ್ರಿಯೆ ನೀಡುತ್ತಾರೆ. ಸದ್ಯ ಅವರು ಬಣ್ಣದ ಲೋಕದಿಂದ ದೂರವಾಗಿದ್ದಾರೆ. ‘ರಾಧಾ ರಮಣ’ ಧಾರಾವಾಹಿಯಲ್ಲಿ ಮಾಡಿದ ತಾರತಮ್ಯದಿಂದ ನಟನೆಯಿಂದ ಬ್ರೇಕ್ ತೆಗೆದುಕೊಂಡಿರೋದಾಗಿ ಆಶಿತಾ ಹೇಳಿಕೆ ನೀಡಿದ್ದರು. ಅಲ್ಲದೇ ಕನ್ನಡ ಚಿತ್ರರಂಗದ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇನ್ನು ಆಶಿತಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಆಗಾಗ ಅವರು ಸೋಶಿಯಲ್ ಮೀಡಿಯಾದಲ್ಲಿ ಅಮ್ಮನ ಕುರಿತಾಗಿ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.

Leave a comment

Your email address will not be published.