ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ದಿನದ ಖರ್ಚು ಲಕ್ಷಕ್ಕಿಂತಲೂ ಹೆಚ್ಚು

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ. ದರ್ಶನ್ ರವರ ಬಳಿ ಕೋಟಿಗಟ್ಟಲೆ ಆಸ್ತಿ ಇದೆ. ಒಂದೊಂದು ಸಿನಿಮಾಗು ದರ್ಶನ್ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ನಟ ದರ್ಶನ್ ರವರು ಒಂದು ದಿನಕ್ಕೆ ಬರೋಬ್ಬರಿ ಒಂದುವರೆ ಲಕ್ಷ ಹಣವನ್ನು ಖರ್ಚು ಮಾಡುತ್ತಾರಂತೆ ಒಂದು ತಿಂಗಳಿಗೆ 45 ಲಕ್ಷಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರಂತೆ.

 

 

ದರ್ಶನ್ ಇಷ್ಟು ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ತಾವು ಸಾಕಿರುವ ಪ್ರಾಣಿ ಪಕ್ಷಿಗಳ ಆಹಾರಕ್ಕಾಗಿ ಖರ್ಚು ಮಾಡುತ್ತಾರಂತೆ ಅಷ್ಟೇ ಅಲ್ಲದೆ ಅನಾಥಾಶ್ರಮದ ಮಕ್ಕಳಿಗೂ ಕೂಡ ಈ ದುಡ್ಡಿನಲ್ಲಿ ಮೀಸಲಿಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಚಂದನವನದ ಬಹು ಬೇಡಿಕೆಯ ನಟರಾಗಿದ್ದಾರೆ. ಸದ್ಯಕ್ಕೆ ದರ್ಶನ್ ರವರ ಲೀಸ್ಟ್ ನಲ್ಲಿ ಸಾಕಷ್ಟು ಸಿನಿಮಾಗಳಿವೆ.

 

 

ಸಿನಿಮಾ ಹೊರತುಪಡಿಸಿ ಸಾಕಷ್ಟು ವಿಚಾರಗಳಲ್ಲಿ ಆಗಾಗ ಸುದ್ದಿಯಾಗುವ ದರ್ಶನ್ ರವರಿಗೆ ಅಪರಿಮಿತ ಅಭಿಮಾನಿಗಳ ಸಾಗರವಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕೈಯಲ್ಲಿ ಇದೀಗ ಕ್ರಾಂತಿ ಹಾಗೂ ಡಿ-56 ಸಿನಿಮಾಗಳಿವೆ. ಈಗಾಗಲೇ ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿ ಬಿಡುಗಡೆಗೆ ಸಿದ್ಧವಾಗಿದ್ದು ಸದ್ಯದಲ್ಲೇ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮವಾಗಿ ಹೊರಹೊಮ್ಮಲಿದೆ. ತರುಣ್ ಸುದೀಪ್ ನಿರ್ದೇಶನದ ಡಿ-56 ಸಿನಿಮಾದಲ್ಲೂ ದರ್ಶನ್ ನಟಿಸುತ್ತಿದ್ದು ಇತ್ತೀಚಿಗಷ್ಟೇ ಈ ಸಿನಿಮಾದ ಮುಹೂರ್ತವು ನೆರವೇರಿದೆ.

 

 

ಡಿ-56 ಸಿನಿಮಾದಲ್ಲಿ ನಟಿ ಮಾಲಾಶ್ರೀಯ ಪುತ್ರಿ ರಾಧನರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮವಾದ ಕ್ರಾಂತಿ ಚಿತ್ರದ ಬಗ್ಗೆ ದೀಪಾವಳಿ ಹಬ್ಬದಂದು ಡಿ ಬಾಸ್ ಗುಡ್ ನ್ಯೂಸ್ ನೀಡಿದ್ದಾರೆ. ಆದರೆ ಈ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಡಿ ಬಾಸ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಅಪ್ಡೇಟ್ಗಳಿಗಾಗಿ ಕಾದು ಕುಳಿತಿದ್ದಾರೆ.
ಕ್ರಾಂತಿ ಚಿತ್ರದಲ್ಲಿ ಡಿ ಬಾಸ್ ಗೆ ರಚಿತರಾಮ್ ಜೋಡಿ ಆಗಿ ಕಾಣಿಸಿಕೊಂಡಿದ್ದಾರೆ. ಕ್ರಾಂತಿ ಚಿತ್ರ ಯಾವ ರೀತಿ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ ಎಂದು ಕಾದು ನೋಡೋಣ.

 

Be the first to comment

Leave a Reply

Your email address will not be published.


*